ಏಲಂ ಆಟ': ಈ ಆಟದಲ್ಲಿ ಹರಾಜಾಕಾವುದನ್ನು ಅನುಕರಿಸುವ ಕಾರಣ ಈ ಆಟವನ್ನು ಏಲಂ ಆಟ ಎಂದು ಕರೆಯಲಾಗುತ್ತದೆ. ಈ ಆಟದಲ್ಲಿ ಎಷ್ಟು ಜನ ಬೇಕಾದರೂ ಭಾಗವಹಿಸಬಹುದು. ಹೆಚ್ಚಾಗಿ ಐದರಿಂದ ಹತ್ತು ಮಕ್ಕಳು ಒಟ್ಟಿಗೆ ಆಡುತ್ತಾರೆ. == ಆಟವಾಡಲು ಬೇಕಾಗುವ ವಸ್ತುಗಳು == ಕಡ್ಡಿ ಕಾಗದ ಮನೆಯಲ್ಲಿರುವ ಬೇರೆ ಬೇರೆ ವಸ್ತುಗಳು == ಆಟ ಆಡುವುದು ಹೇಗೆ? == ಏಲಂ ಎಂಬ ಹೆಸರಿನಲ್ಲೇ ಈ ಆಟದ ಅರ್ಥವಿದೆ. ಈ ಆಟದಲ್ಲಿ ವಸ್ತುವನ್ನು ಹಿಡಿದುಕೊಂಡು ಅದನ್ನು ಹರಾಜಾಕುವುದರ ಅನುಕರಣೆ ಮಾಡುತ್ತಾರೆ. ಹರಾಜು ಹಾಕುವಾಗ, ವಸ್ತುಗಳ ದರವನ್ನು ಮೂರು ಸಲ ಕೂಗಲಾಗುತ್ತದೆ. ಯಾರು ಹೆಚ್ಚು ಹಣವನ್ನು ಕೊಡಲು ಸಿದ್ದರಿರುತ್ತಾರೋ ಅವರಿಗೆ ವಸ್ತುವನ್ನು ನೀಡಲಾಗುತ್ತದೆ. ಹೀಗೆ ಈ ಆಟವನ್ನು ಆಡಲಾಗುತ್ತದೆ . == ಬೇರೆ ಭಾಷೆಯಲ್ಲಿ ಆಟದ ಹೆಸರು == ಆಕ್ಷನ್ ಆಟ (ಇಂಗ್ಲಿಷ್ ನಲ್ಲಿ) == ಉಲ್ಲೇಖಗಳು ==